RBI Assistant Recruitment 2026: ಡಿಗ್ರಿ ಆದವರಿಗೆ ಆರ್‌ಬಿಐ ಬ್ಯಾಂಕ್‌ನಲ್ಲಿ 650 ಹುದ್ದೆಗಳು! ಪರೀಕ್ಷೆ ಯಾವಾಗ? ಅಪ್ಲೈ ಮಾಡುವುದು ಹೇಗೆ? ಡೈರೆಕ್ಟ್ ಲಿಂಕ್ ಇಲ್ಲಿದೆ.
ನಮಸ್ಕಾರ ಸ್ನೇಹಿತರೇ, KELASADA KANNADI ಗೆ ಸ್ವಾಗತ.
ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿ ಸುದ್ದಿ ನೀಡಿದೆ. ದೇಶದಾದ್ಯಂತ ಖಾಲಿ ಇರುವ ಬರೋಬ್ಬರಿ 650 ಅಸಿಸ್ಟೆಂಟ್ (Assistant) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.ಇದು ಕೇಂದ್ರ ಸರ್ಕಾರದ ಕಾಯಂ ಉದ್ಯೋಗವಾಗಿದ್ದು, ಉತ್ತಮ ಸಂಬಳ ಮತ್ತು ಸೌಲಭ್ಯಗಳು ಸಿಗುತ್ತವೆ. ಹಾಗಾದರೆ, ಇದಕ್ಕೆ ವಿದ್ಯಾರ್ಹತೆ ಏನು? ವಯಸ್ಸಿನ ಮಿತಿ ಎಷ್ಟು? ಕೊನೆಯ ದಿನಾಂಕ ಯಾವಾಗ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಹುದ್ದೆಯ ವಿವರಗಳು (Job Details):
ಇಲಾಖೆಯ ಹೆಸರು: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India - RBI).
ಹುದ್ದೆಯ ಹೆಸರು: ಅಸಿಸ್ಟೆಂಟ್ (Assistant).
ಒಟ್ಟು ಹುದ್ದೆಗಳು: 650.
ಕೆಲಸದ ಸ್ಥಳ: ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿರುವ ಆರ್‌ಬಿಐ ಶಾಖೆಗಳು.
2. ಪ್ರಮುಖ ದಿನಾಂಕಗಳು (Important Dates):
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16 ಫೆಬ್ರವರಿ 2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08 ಮಾರ್ಚ್ 2026.
ಪೂರ್ವಭಾವಿ ಪರೀಕ್ಷೆ (Prelims Exam): 11 ಏಪ್ರಿಲ್ 2026 (ತಾತ್ಕಾಲಿಕ).
ಮುಖ್ಯ ಪರೀಕ್ಷೆ (Mains Exam): 07 ಜೂನ್ 2026 (ತಾತ್ಕಾಲಿಕ).
3. ವಿದ್ಯಾರ್ಹತೆ (Education Qualification):
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಮುಗಿರಸಬೇಕು.
ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
(SC/ST/PWD ಅಭ್ಯರ್ಥಿಗಳು ಜಸ್ಟ್ ಪಾಸ್ ಆಗಿದ್ದರೆ ಸಾಕು).
ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ (MS Office, Typing) ಇರಬೇಕು.
4. ವಯೋಮಿತಿ (Age Limit):
ದಿನಾಂಕ 01-02-2026 ಕ್ಕೆ ಅನ್ವಯವಾಗುವಂತೆ:
ಕನಿಷ್ಠ ವಯಸ್ಸು: 20 ವರ್ಷ.
ಗರಿಷ್ಠ ವಯಸ್ಸು: 28 ವರ್ಷ.
(OBC ಅವರಿಗೆ 3 ವರ್ಷ ಮತ್ತು SC/ST ಅವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
5. ಆಯ್ಕೆ ವಿಧಾನ (Selection Process):
ಪೂರ್ವಭಾವಿ ಪರೀಕ್ಷೆ (Prelims - Online Exam).
ಮುಖ್ಯ ಪರೀಕ್ಷೆ (Mains - Online Exam).
ಭಾಷಾ ಪರೀಕ್ಷೆ (Language Proficiency Test - LPT).
ಗಮನಿಸಿ: ನೀವು ಕರ್ನಾಟಕದಿಂದ (ಬೆಂಗಳೂರು ರೀಜನ್) ಅರ್ಜಿ ಹಾಕಿದರೆ, ನಿಮಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರಲೇಬೇಕು.
6. ಅರ್ಜಿ ಶುಲ್ಕ (Application Fee):
General / OBC / EWS ಅಭ್ಯರ್ಥಿಗಳಿಗೆ: ₹450/- (+ GST ಇರಬಹುದು).
SC / ST / PWD / Ex-Servicemen ಅಭ್ಯರ್ಥಿಗಳಿಗೆ: ₹50/-.
7. ಪ್ರಮುಖ ಲಿಂಕ್‌ಗಳು (Important Links)
ಅಧಿಕೃತ ನೋಟಿಫಿಕೇಶನ್ (PDF) ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿhttps://opportunities.rbi.org.in/Scripts/bs_viewcontent.aspx?Id=4424
ಸ್ನೇಹಿತರೇ, ಅರ್ಜಿ ಸಲ್ಲಿಸಲು ಮತ್ತು ನೋಟಿಫಿಕೇಶನ್ ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಬಳಸಿ.
ಆನ್‌ಲೈನ್ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ:https://ibpsreg.ibps.in/rbiafeb26
ಅಧಿಕೃತ ವೆಬ್‌ಸೈಟ್:www.rbi.org.in
ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗಲು ಬಯಸುವವರಿಗೆ ಒಂದು ಸುವರ್ಣಾವಕಾಶ. ಮಾರ್ಚ್ 8 ರ ಒಳಗೆ ತಪ್ಪದೇ ಅರ್ಜಿ ಹಾಕಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ (Share) ಮಾಡಿ. ಎಲ್ಲರಿಗೂ ಸಹಾಯವಾಗಲಿ.
Comments
Post a Comment